The incident happened in Belagavi. Kidnappers got assaulted by Belagavi Police. To know more, watch this video. <br /> <br />ಕಿಡ್ನಾಪರ್ ಗಳಿಗೆ ಪೊಲೀಸ್ ಅಧಿಕಾರಿಯೊಬ್ಬರು ಎದ್ವಾತದ್ವಾ ಥಳಿಸಿರುವ ಘಟನೆ ಬೆಳಗಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿಪಿಐ ನಾರಾಯಣ ಸ್ವಾಮಿ, ಆರೋಪಿಗಳಿಗೆ ಲಾಟಿಯಿಂದ ಮನಬಂದಂತೆ ಥಳಿಸುತ್ತಿರುವ ಈ ವಿಡಿಯೋ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ಬೆಳಗಾವಿ ತಾಲೂಕಿನ ವಾಘವಾಡೆ ಗ್ರಾಮದಲ್ಲಿ ಯುವಕನೊಬ್ಬನ ಅಪಹರಣವಾಗಿತ್ತು. ಈ ಪ್ರಕರಣದಲ್ಲಿ ನಾಲ್ಕು ಆರೋಪಿಗಳು ಭಾಗಿಯಾಗಿರುವುದಾಗಿ ಮಾಹಿತಿಯೂ ತಿಳಿದುಬಂದಿತ್ತು. ನಾಲ್ವರಲ್ಲಿ ಇಬ್ಬರು ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು. ಅಲ್ಲಿಗೆ ತೆರಳಿದ ಸಿಪಿಐ ನಾರಾಯಣ ಸ್ವಾಮಿ,ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಕೈಯಲ್ಲಿದ್ದ ಲಾಠಿಯಿಂದ ಮನಬಂದಂತೆ ಥಳಿಸಿದ್ದಾರೆ. <br />